Bigg Boss Kannada Season 5 : ದಿವಾಕರ್ ಆಪ್ತ ಗೆಳೆಯ ಚಂದನ್ ಶೆಟ್ಟಿ | Filmibeat Kannada

2017-11-14 787

'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಗೆ ಆಪ್ತ ಗೆಳೆಯ ಯಾರು ಅಂತೀರಾ? ಬೀದಿ ಬೀದಿಗಳಲ್ಲಿ ಆಯುರ್ವೇದಿಕ್ ಪ್ರಾಡಕ್ಟ್ ಮಾರುತ್ತಾ ಕಾಲ ಕಳೆಯುತ್ತಿದ್ದ 'ಸೇಲ್ಸ್ ಮ್ಯಾನ್' ದಿವಾಕರ್ 'ಬಿಗ್ ಬಾಸ್' ಮನೆಗೆ ಬಂದ್ಮೇಲೆ ಇಡೀ ಕರ್ನಾಟಕದಲ್ಲಿ ಫೇಮಸ್ ಆಗಿದ್ದಾರೆ. ಹಿಂದು ಮುಂದೆ ಯೋಚನೆ ಮಾಡದೆ, ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇಲ್ಲದೆ, ಅನಿಸಿದ್ದನ್ನ ನೇರವಾಗಿ ಮಾತನಾಡುವ ದಿವಾಕರ್ ಕಂಡ್ರೆ 'ಬಿಗ್ ಬಾಸ್' ಮನೆಯಲ್ಲಿ ಅಷ್ಟಕಷ್ಟೆ.ಹಾಗ್ನೋಡಿದ್ರೆ, ಮೊದಲೆರಡು ವಾರ ಜಗಳ, ಗದ್ದಲ, ಗಲಾಟೆಯಿಂದ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ಸದ್ದು ಮಾಡಿದವರು ಇದೇ ದಿವಾಕರ್. ಇಂತಿಪ್ಪ ದಿವಾಕರ್ ಗೆ 'ದೊಡ್ಮನೆ'ಯಲ್ಲಿ ಆತ್ಮೀಯ ಗೆಳೆಯ ಯಾರು ಗೊತ್ತಾ.? ಬೇರಾರೂ ಅಲ್ಲ, ಚಂದನ್ ಶೆಟ್ಟಿ.!
ತಮ್ಮ ಮನಸ್ಸನ್ನು ಅರ್ಥ ಮಾಡಿಕೊಂಡಿರುವ ಚಂದನ್ ಶೆಟ್ಟಿ ಅಂದ್ರೆ ದಿವಾಕರ್ ಗೆ ಅಚ್ಚುಮೆಚ್ಚು. ಹೀಗಾಗಿ ತಮಗಿಂತ ಮುಂಚೆ ಚಂದನ್ ಶೆಟ್ಟಿ ಔಟ್ ಆದರೆ ಬೇಸರ ಆಗುತ್ತೆ ಅಂತ ದಿವಾಕರ್ ಹೇಳಿಕೊಂಡಿದ್ದಾರೆ.

Bigg Boss Kannada 5: Week 5: Chandan Shetty is Diwakar's Best friend in #BBK5 house

Videos similaires